“ಹಿಂದುತ್ವ ಎಂದರೆ ದಲಿತರನ್ನು ಹೊರಗಿಡುವ ಜಾತಿತ್ವ”; ಬಿಜೆಪಿಯನ್ನು ಕುಟುಕಿದ ಸಚಿವ ಹೆಚ್​ಸಿ ಮಹದೇವಪ್ಪ

ಬೆಂಗಳೂರು:ಬಿಜೆಪಿಯು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತು ವಿಪಕ್ಷೀಯ ಸ್ಥಾನಕ್ಕೆ ದಲಿತರನ್ನು ನೇಮಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಚ್ ಸಿ ಮಹದೇವಪ್ಪ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

“ದಲಿತ ಪ್ರೇಮ ಎಂಬುದು ಬಾಯಿ ಮಾತಿನ ಸರಕಾಗಬಾರದು. ಅದು ಕೃತಿಯಲ್ಲೂ ಇದ್ದರೆ ಚೆನ್ನ.

ಚುನಾವಣೆಗೆ ಮೊದಲು ಮತ್ತು ನಂತರದಲ್ಲಿ ದಲಿತರಿಗೆ ಸ್ಥಾನ ನೀಡಿ ಎನ್ನುತ್ತಿದ್ದ ಬಿಜೆಪಿಗರು ವಿಪಕ್ಷೀಯ ಸ್ಥಾನಕ್ಕೆ ಅಥವಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತರನ್ನೇ ನೇಮಿಸಬಹುದು ಎಂದುಕೊಂಡಿದ್ದೆ. ಆದರೆ ಅದು ಹಾಗಾಗಲಿಲ್ಲ ಹಿಂದುತ್ವ ಎಂದರೆ ದಲಿತರನ್ನು ಹೊರಗಿಡುವ ಜಾತಿತ್ವ ಎಂದು ಮತ್ತೊಮ್ಮೆಸಾಬೀತಾಯಿತು. #ದಲಿತ_ವಿರೋಧಿ_ಬಿಜೆಪಿ ” ಎಂದು ಡಾ. ಹೆಚ್​ಸಿ ಮಹದೇವಪ್ಪ ಎಕ್ಸ್​​ ನಲ್ಲಿ ಪೋಸ್ಟ್​ ಮಾಡಿದ್ದಾರೆ.

 

विज्ञापन बॉक्स